Telegram    Join My Telegram          WhatsApp    Join My WhatsApp  

ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ.

ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಆಗಿದ್ದ ರಾಸ್ಸಿ ವ್ಯಂಡರ್ ದುಸ್ಸನ್ ಅವರು ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.ಹೌದು 37ವರ್ಷದ ಬಲಗೈ ಬ್ಯಾಟರ್ ಡಾಸ್ಸೇನ್ರವರು ಇಂದು (ಏಪ್ರಿಲ್ 2) ತಮ್ಮ ನಿವೃತ್ತಿಯ ನಿರ್ಧಾರವನ್ನು ಧೃಡಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಪ್ರಯಾಣವನ್ನು ಪ್ರತಿಬಿಂಬಿಸುವ ಹೃದಯಸ್ಪರ್ಶಿ ಸಂದೇಶವನ್ನು ಹಂಚಿಕೊಂಡು ತಮ್ಮ ವೃತ್ತಿಗೆ ವಿಧಾಯವನ್ನು ಘೋಷಿಸಿದ್ದಾರೆ.                                                                                     ಇತೀಚೆಗೆ ನಡೆದ ಸೌತ್ ಆಫ್ರಿಕಾ ಲೀಗ್ನಲ್ಲೂ ಸಹ ಪಾಲ್ಗೊಂಡಿದ್ದರು. ಈ ವಿಧಾಯದ ನಿರ್ಧಾರವನ್ನು ಯುವ ಆಟಗಾರರಿಗೆ ಅವಕಾಶ ನೀಡುವುದಕ್ಕಾಗಿ ಈ ನಿರ್ಧಾರವನ್ನು ಕೈಗೊಂಡಿದ್ರು. ನಾನು ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುತ್ತಿರುವುದ್ದಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿಕೊಂಡರು.                                                                                     ಆದರೆ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು (CCA) ಇತ್ತೀಚೆಗೆ ಪ್ರಕಟಿಸಿದ 2026-2027ರ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಡಸ್ಸೇನ್ ಅವರ ಹೆಸರನ್ನು ಕೈಬಿಟ್ಟಿತ್ತು. ಇದರಿಂದ ಬೇಸರಗೊಂಡಿರುವ ಅವರು ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಬಹುದಾಗಿದೆ.                                                     ‘ ದಕ್ಷಿಣ ಆಫ್ರಿಕಾ ಜೆರ್ಸಿ ಧರಿಸಿರುವುದು ಒಂದು ಸಾಧನೆ. ಅದು ನನ್ನ ಆಟದ ಗುಣಮಟ್ಟ ಮತ್ತು ಸಮರ್ಪಣಾ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದು ನನ್ನ ದೇಶಕ್ಕಾಗಿ ಆಡಿರುವುದು ನನ್ನ ಜೀವನದ ದೊಡ್ಡ ಗೌರವ ಎಂದು ಹೇಳಿಕೊಂಡಿದ್ದಾರೆ.                                                                                 ಡಸ್ಸೇನ್ ಅವರು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ್ ವೃತ್ತಿಜೀವನವನ್ನು ಕೊನೆಗೊಳಿಸಿದರು, ದೇಶಿಯ ತಂಡವಾದ ಲಯನ್ಸ್ ಪರ ಆಡುವುದಾಗಿ ಮತ್ತು ತರಬೇತುದಾರರಾಗಿ ಕ್ರಿಕೆಟ್ಗೆ ಕೊಡುಗೆ ನೀಡುವುದಾಗಿ ತನ್ನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.                                                                   ವ್ಯಾನ್ ಡರ್ ಡಸ್ಸೇನ್ರವರು 2018ರ ಅಕ್ಟೋಬರ್ 9ರಂದು ಟಿ -20 ಕ್ರಿಕೆಟನ ಮೂಲಕ ತಮ್ಮ ಇಂಟರ್ನ್ಯಾಷನಲ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಬಳಿಕ ಅವರು ಮೂರು ಮಾದರಿಯ ಕ್ರಿಕೆಟ್ನಲ್ಲೂ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪರ ಅವರು 57 ಟಿ-20 ಪಂದ್ಯಗಳು, 71ಎಕದಿನ ಪಂದ್ಯಗಳು, 18 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಕೊನೆಯದ್ದಾಗಿ 2025ರ ಆಗಸ್ಟ್ 15ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಕಟ್ಟಾ ಕಡೆಯ ಪಂದ್ಯವಾಗಿದೆ.

Leave a comment