ಸಿಬ್ಬಂದಿ ನೇಮಕಾತಿ ಆಯೋಗವು (SSC) SSC CHSL 2026 Notification ಅಡಿಯಲ್ಲಿ ಒಟ್ಟು 2,536 ತಾತ್ಕಾಲಿಕ ಗ್ರೂಪ್ ಸಿ (Group C) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯು ದ್ವಿತೀಯ ಪಿಯುಸಿ (10+2) ಪಾಸಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಒಂದು ಸುವರ್ಣ ಅವಕಾಶವಾಗಿದೆ. ಈ ಬಾರಿ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲೂ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಈ ನೇಮಕಾತಿಯ ಸಂಪೂರ್ಣ ವಿವರವಾದ ಮಾಹಿತಿ ಇಲ್ಲಿದೆ:
1. ಪ್ರಮುಖ ದಿನಾಂಕಗಳು (Important Dates)
ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ:
ಅಧಿಸೂಚನೆ ಪ್ರಕಟವಾದ ದಿನಾಂಕ: 07 ಸೆಪ್ಟೆಂಬರ್ 2026
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 07 ಸೆಪ್ಟೆಂಬರ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಅಕ್ಟೋಬರ್ 2026 (ರಾತ್ರಿ 11:00 ಗಂಟೆಯವರೆಗೆ)
ಆನ್ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 08 ಅಕ್ಟೋಬರ್ 2026
ಅರ್ಜಿ ತಿದ್ದುಪಡಿ ವಿಂಡೋ (Correction Window): 14 ಅಕ್ಟೋಬರ್ನಿಂದ 16 ಅಕ್ಟೋಬರ್ 2026
ಪರೀಕ್ಷೆಯ ದಿನಾಂಕ (Tier-I & Tier-II): ಆಯೋಗದಿಂದ ಶೀಘ್ರದಲ್ಲೇ ಪ್ರಕಟಿಸಲಾಗುವುದು.
2. ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ (Post Wise Vacancies & Salary)
ಒಟ್ಟು 2,536 ಹುದ್ದೆಗಳನ್ನು ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ:
ಹುದ್ದೆಯ ಹೆಸರು (Post Name) ಪೇ ಲೆವೆಲ್ (Pay Level) ಮಾಸಿಕ ವೇತನ ಶ್ರೇಣಿ (Pay Scale)
Lower Division Clerk (LDC) / Junior Secretariat Assistant (JSA) ಲೆವೆಲ್ – 2 ₹19,900 ರಿಂದ ₹63,200
Data Entry Operator (DEO) ಲೆವೆಲ್ – 4 ಮತ್ತು 5 ₹25,500 ರಿಂದ ₹81,100 / ₹29,200 ರಿಂದ ₹92,300
Data Entry Operator (DEO) Grade ‘A’ ಲೆವೆಲ್ – 4 ₹25,500 ರಿಂದ ₹81,100
3. ಅರ್ಹತಾ ಮಾನದಂಡಗಳು (Eligibility Criteria)
ಎ) ಶೈಕ್ಷಣಿಕ ಅರ್ಹತೆ (Educational Qualification):
LDC / JSA ಮತ್ತು ಸಾಮಾನ್ಯ DEO ಹುದ್ದೆಗಳಿಗೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ (12ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಗ್ರಾಹಕ ವ್ಯವಹಾರಗಳ ಸಚಿವಾಲಯ, ಸಾಂಸ್ಕೃತಿಕ ಸಚಿವಾಲಯ ಇಲಾಖೆಗಳ DEO ಹುದ್ದೆಗಳಿಗೆ: 12ನೇ ತರಗತಿಯನ್ನು ವಿಜ್ಞಾನ ವಿಭಾಗದಲ್ಲಿ (Science Stream) ಗಣಿತ (Mathematics) ಒಂದು ವಿಷಯವಾಗಿ ಓದಿ ಪಾಸ್ ಮಾಡಿರಬೇಕು.
ಬಿ) ವಯೋಮಿತಿ (Age Limit – 01 ಆಗಸ್ಟ್ 2026 ಕ್ಕೆ ಅನ್ವಯಿಸುವಂತೆ):
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 27 ವರ್ಷಗಳು
(ಅಂದರೆ, ಅಭ್ಯರ್ಥಿಗಳು 02 ಆಗಸ್ಟ್ 1999 ಕ್ಕಿಂತ ಮೊದಲು ಮತ್ತು 01 ಆಗಸ್ಟ್ 2008 ರ ನಂತರ ಜನಿಸಿರಬಾರದು).
ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ (Age Relaxation):
OBC ಅಭ್ಯರ್ಥಿಗಳಿಗೆ: 3 ವರ್ಷಗಳು
SC / ST ಅಭ್ಯರ್ಥಿಗಳಿಗೆ: 5 ವರ್ಷಗಳು
PwBD (ಅಂಗವಿಕಲ) ಅಭ್ಯರ್ಥಿಗಳಿಗೆ: 10 ವರ್ಷಗಳಿಂದ 15 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ.
4. ಅರ್ಜಿ ಶುಲ್ಕ (Application Fee)
ಸಾಮಾನ್ಯ (UR), OBC ಮತ್ತು EWS ವರ್ಗದ ಪುರುಷ ಅಭ್ಯರ್ಥಿಗಳಿಗೆ: ₹100/-
ಮಹಿಳೆಯರು, SC, ST, PwBD ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ (ಯಾವುದೇ ಶುಲ್ಕವಿಲ್ಲ).
ಶುಲ್ಕವನ್ನು ಭೀಮ್ ಯುಪಿಐ, ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ಗಳ ಮೂಲಕ ಆನ್ಲೈನ್ನಲ್ಲಿ ಪಾವತಿಸಬಹುದು.
5. ಆಯ್ಕೆ ಪ್ರಕ್ರಿಯೆ (Selection Process)
ಖದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಪ್ರಮುಖವಾಗಿ ಮೂರು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
Tier-I ಪರೀಕ್ಷೆ: ಕಂಪ್ಯೂಟರ್ ಆಧಾರಿತ ವಸ್ತುನಿಷ್ಠ (Objective) ಪರೀಕ್ಷೆ.
Tier-II ಪರೀಕ್ಷೆ: ಕಂಪ್ಯೂಟರ್ ಆಧಾರಿತ ವಿವರವಾದ/ವಿಭಾಗೀಯ ಪರೀಕ್ಷೆ.
ಕೌಶಲ್ಯ ಪರೀಕ್ಷೆ / ಟೈಪಿಂಗ್ ಟೆಸ್ಟ್ (Skill/Typing Test): ಹುದ್ದೆಗಳಿಗೆ ಅನುಗುಣವಾಗಿ ವೇಗವನ್ನು ಪರೀಕ್ಷಿಸಲಾಗುತ್ತದೆ.
ದಾಖಲೆಗಳ ಪರಿಶೀಲನೆ (Document Verification).
Tier-I ಪರೀಕ್ಷಾ ಮಾದರಿ (Exam Pattern):
Tier-I ಪರೀಕ್ಷೆಯು ಒಟ್ಟು 200 ಅಂಕಗಳಿಗೆ ನಡೆಯಲಿದ್ದು, 60 ನಿಮಿಷಗಳ ಕಾಲಾವಕಾಶ ಇರುತ್ತದೆ. ಇದರಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.50 ಅಂಕಗಳ ನೆಗೆಟಿವ್ ಮಾರ್ಕಿಂಗ್ ಇರುತ್ತದೆ.
ಇಂಗ್ಲಿಷ್ ಭಾಷೆ (English Language): 25 ಪ್ರಶ್ನೆಗಳು – 50 ಅಂಕಗಳು
ಸಾಮಾನ್ಯ ಬುದ್ಧಿಮತ್ತೆ (General Intelligence): 25 ಪ್ರಶ್ನೆಗಳು – 50 ಅಂಕಗಳು
ಪರಿಮಾಣಾತ್ಮಕ ಆಪ್ಟಿಟ್ಯೂಡ್ (Quantitative Aptitude): 25 ಪ್ರಶ್ನೆಗಳು – 50 ಅಂಕಗಳು
ಸಾಮಾನ್ಯ ಜಾಗೃತಿ (General Awareness): 25 ಪ್ರಶ್ನೆಗಳು – 50 ಅಂಕಗಳು
6. ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು (Exam Centers in Karnataka)
ಕರ್ನಾಟಕದ ಅಭ್ಯರ್ಥಿಗಳು ತಮ್ಮ ಹತ್ತಿರದ ಜಿಲ್ಲೆಗಳಲ್ಲೇ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ:
ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ ಮತ್ತು ಕಲಬುರಗಿ.
7. ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಅಭ್ಯರ್ಥಿಗಳು ಮೊದಲು ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್ಸೈಟ್ ಆದ SSC Official Website ಗೆ ಭೇಟಿ ನೀಡಬೇಕು.
ಮೊದಲ ಬಾರಿ ಅರ್ಜಿ ಸಲ್ಲಿಸುವವರು ‘One Time Registration (OTR)’ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಪಡೆಯಬೇಕು.
ನಂತರ ಲಾಗಿನ್ ಆಗಿ “CHSL 2026” ಲಿಂಕ್ ಕ್ಲಿಕ್ ಮಾಡಿ, ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ.
ಅಗತ್ಯವಿರುವ ಭಾವಚಿತ್ರ (Photo) ಮತ್ತು ಸಹಿ (Signature) ಯನ್ನು ನಿಗದಿತ ಸೈಜ್ನಲ್ಲಿ ಅಪ್ಲೋಡ್ ಮಾಡಿ.
ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿ, ಅರ್ಜಿಯನ್ನು ಸಬ್ಮಿಟ್ (Submit) ಮಾಡಿ ಹಾಗೂ ಮುಂದಿನ ಉಲ್ಲೇಖಕ್ಕಾಗಿ ಪ್ರಿಂಟ್ಔಟ್ ತೆಗೆದುಕೊಳ್ಳಿ.
ಸಲಹೆ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯದೆ, ಸರ್ವರ್ ದೋಷಗಳನ್ನು ತಪ್ಪಿಸಲು ಇಂದೇ SSC Portal ನಲ್ಲಿ ನಿಮ್ಮ ಫಾರ್ಮ್ ಅನ್ನು ಭರ್ತಿ ಮಾಡಿ.